ಸಿರಿಮಾವೋ ರತ್ವಟ್ಟೆ ಡಯಾಸ್ ಬಂಡಾರನಾಯ್ಕೆ (ಎಪ್ರಿಲ್ ೧೭, ೧೯೧೬ – ಅಕ್ಟೋಬರ್ ೧೦, ೨೦೦೦) ಶ್ರೀಲಂಕಾದ ಒಬ್ಬ ರಾಜಕಾರಣಿ ಮತ್ತು ವಿಶ್ವದ ಮೊದಲ ಮಹಿಳಾ ಪ್ರಧಾನಮಂತ್ರಿಯಾಗಿದ್ದರು. ಅವರು ಮೂರು ಬಾರಿ, ೧೯೬೦ರಿಂದ ೧೯೬೫ರವರೆಗೆ, ೧೯೭೦ರಿಂದ ೧೯೭೭ರವರೆಗೆ ಮತ್ತು ೧೯೯೪ರಿಂದ ೨೦೦೦ರವರೆಗೆ ಸಿಲೋನ್ ಮತ್ತು ಶ್ರೀಲಂಕಾದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರು ದೀರ್ಘಕಾಲದವರೆಗೆ ಶ್ರೀಲಂಕಾ ಸ್ವತಂತ್ರ ಪಕ್ಷದ ನಾಯಕಿಯಾಗಿದ್ದರು.